Bhagamandala was inundated and Madikeri-Talakaveri road link cut off by continuous heavy rain in Kodagu district on Wednesday. The district administration declared a holiday for schools and colleges on July 20 as advance precaution.
ಕೊಡಗಿನಲ್ಲಿ ಕಕ್ಕಡ ಮಾಸ(ಆಟಿ ತಿಂಗಳು) ಎಂದರೆ ನಡು ಮಳೆಗಾಲದ ಕಾಲ. ಈ ವೇಳೆಯಲ್ಲಿ ಮಳೆ ಅಧಿಕವಾಗಿ ಸುರಿದು ತೊರೆ, ಹೊಳೆ, ನದಿ ಧುಮ್ಮಿಕ್ಕಿ ಹರಿಯುತ್ತದೆ. ಕೆಲವು ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ದ್ವೀಪಗಳಾಗಿ ಬಿಡುತ್ತವೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದನ್ನು ನೋಡಿದರೆ ಮುಂಗಾರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ.